ಝೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ 'ಜೋಡಿ ನಂ.1' ಭಾರತೀಯ ಕನ್ನಡ ಭಾಷೆಯ ರಿಯಾಲಿಟಿ ಶೋ ಆಗಿದೆ. ಈ ಕಾರ್ಯಕ್ರಮವು ಜನಪ್ರಿಯ ಹಿಂದಿ ರಿಯಾಲಿಟಿ ಶೋ "ಸ್ಮಾರ್ಟ್ ಜೋಡಿ" ಯಿಂದ ಪ್ರೇರಣೆ ಪಡೆದಿದೆ. ಈ ಪ್ರದರ್ಶನವು ಹನ್ನೆರಡು ನಿಜ ಜೀವನದ ತಾರಾದಂಪತಿಗಳನ್ನು ಒಳಗೊಂಡಿದೆ. ಅವರು ಜೋಡಿ ನಂ.1 ಪ್ರಶಸ್ತಿಯನ್ನು ಗೆಲ್ಲಲು ಸ್ಪರ್ಧಿಸುವ ಜೊತೆಗೆ, ಮೋಜಿನ ಮತ್ತು ಸವಾಲಿನ ಆಟಗಳು ಇರುತ್ತವೆ. ಸೆಲೆಬ್ರಿಟಿಗಳು ತಮ್ಮ ಸಂಗಾತಿಗಳೊಂದಿಗೆ ತಮ್ಮ ಕೆಮಿಸ್ಟ್ರಿಯನ್ನು ಸಾಬೀತುಪಡಿಸಲು ಸ್ಪರ್ಧಿಸುತ್ತಾರೆ. == ಕಾರ್ಯಕ್ರಮ ಒಳನೋಟ == ಸೆಲೆಬ್ರಿಟಿಗಳು ತಮ್ಮ ಸಂಗಾತಿಯವರೊಂದಿಗೆ ತಮ್ಮ ಕೆಮಿಸ್ಟ್ರಿಯನ್ನು ಸಾಬೀತುಪಡಿಸಲು ಸ್ಪರ್ಧಿಸುತ್ತಾರೆ. ಈ ಕಾರ್ಯಕ್ರಮದಲ್ಲಿ ಚಲನಚಿತ್ರ ನಟ ನೆನಪಿರಲಿ ಪ್ರೇಮ್ ಮತ್ತು ನಟಿ ಮಾಳವಿಕಾ ಅವಿನಾಶ್ ತೀರ್ಪುಗಾರಾಗಿದ್ದಾರೆ. ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ಕಾರ್ಯಕ್ರಮವನ್ನು ನಿರೂಪಣೆ ಮಾಡಿದ್ದಾರೆ. ಈ ಕಾರ್ಯಕ್ರಮವು ವಾರಾಂತ್ಯದಲ್ಲಿ ಪ್ರಸಾರವಾಗುತ್ತಿತ್ತು. === ಸೀಸನ್ === == ಸೀಸನ್ 1 == ಸೀಸನ್ 1 ಝೀ ಕನ್ನಡದಲ್ಲಿ ಜೂನ್ 11, 2022 ರಿಂದ ಪ್ರತಿ ಶನಿವಾರ ಮತ್ತು ಭಾನುವಾರ ಸಂಜೆ 6.30 ಕ್ಕೆ ಪ್ರಸಾರವಾಗಿದ್ದು , ಈ ಸೀಸನನಲ್ಲಿ ಹತ್ತು ತಾರಾ ಜೋಡಿಗಳು ಭಾಗವಹಿಸಿದ್ದಾರೆ . ಜೋಡಿ ನಂ.1 ಸೀಸನ್ 1' ರಲ್ಲಿ ಸೆಲೆಬ್ರಿಟಿ ದಂಪತಿಗಳಾದ ನಟ ಅಭಿಜಿತ್ ಮತ್ತು ರೋಹಿಣಿ ದಂಪತಿಗಳು ವಿಜೇತರಾಗಿದ್ದರು. ದಂಪತಿಗಳು ಐದು ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ. ಮೊದಲ ರನ್ನರ್ ಆಪ್ ಕೀರ್ತಿ ಮತ್ತು ಅರ್ಪಿತಾ ದಂಪತಿಗಳಿಗೆ ಮೂರು ಲಕ್ಷ ನಗದು ಬಹುಮಾನ ಮತ್ತು ಎರಡನೇ ರನ್ನರ್ ಆಪ್ ಸಂತೋಷ್ ಮತ್ತು ಮಾನಸ ದಂಪತಿಗಳಿಗೆ ಒಂದು ಲಕ್ಷ ನಗದು ಬಹುಮಾನವನ್ನು ಗೆದ್ದಿದ್ದಾರೆ. === ತಾರಾದಂಪತಿಗಳು === == ಸೀಸನ್ 2 == ಜೋಡಿ ನಂ.1 ಸೀಸನ್ 2ರ ಮೊದಲ ಪ್ರಸಾರ ಸೆಪ್ಟಂಬರ್ 9, 2023 ರಂದು ನಡೆಯಿತು . ಈ ಸೀಸನ್ ಪ್ರತಿ ಶನಿವಾರ ಮತ್ತು ಭಾನುವಾರ ರಾತ್ರಿ 6 ಗಂಟೆಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿದೆ. ಸೀಸನ್ 1 ರಂತೆ ಈ ಬಾರಿಯೂ ನಟ ನೆನಪಿರಲಿ ಪ್ರೇಮ್ ಮತ್ತು ಹಿರಿಯ ನಟಿ ಮಾಳವಿಕಾ ಅವಿನಾಶ್ ತೀರ್ಪುಗಾರಾಗಿದ್ದಾರೆ. ಶ್ವೇತಾ ಚೆಂಗಪ್ಪ ಮತ್ತು ಕುರಿ ಪ್ರತಾಪ್ ಸೀಸನ್ 2 ಅನ್ನು ನಿರೂಪಣೆ ಮಾಡುತ್ತಿದ್ದಾರೆ. ಈ ಬಾರಿ ೧೦ ಮಂದಿ ತಾರಾದಂಪತಿಗಳು ಸ್ಪರ್ಧಿಸಲಿದ್ದಾರೆ . === ತಾರಾದಂಪತಿಗಳು === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಜೋಡಿನಂ.೧ ಸೀಸನ್ ಒಂದರ ಸಂಚಿಕೆಗಳು ಜೋಡಿ ನಂ.೧ ಸೀಸನ್ ಎರಡರ ಸಂಚಿಕೆಗಳು